ಉಪಪರಮಾಣು ಕಣ ಭೌತಶಾಸ್ತ್ರ ಅಥವಾ ರಸಾಯನಶಾಸ್ತ್ರದಲ್ಲಿ ಪರಮಾಣುವಿಗಿಂತ ಚಿಕ್ಕದಾದ ಕಣಗಳನ್ನು ಉಪಪರಮಾಣು ಕಣ ಎನ್ನುತ್ತ್ತಾರೆ.ಇದರಲ್ಲಿ ಪ್ರಾಥಮಿಕ ಹಾಗೂ ಮಿಶ್ರ ಎಂಬ ಎರಡು ವಿಧದ ಕಣಗಳಿವೆ.ಕಣ ಭೌತಶಾಸ್ತ್ರ ಮತ್ತು ಪರಮಾಣು ಭೌತಶಾಸ್ತ್ರ ( ) ಇವುಗಳ ಸ್ವರೂಪ ಮತ್ತು ಅವುಗಳ ಪರಸ್ಪರ ಸಂಬಂಧಗಳ ಅಧ್ಯಯನ ಮಾಡುತ್ತವೆ. ಪ್ರಾಥಮಿಕ ಉಪಪರಮಾಣು ಕಣಗಳ ಸಾಮಾನ್ಯ ಮಾದರಿಯಲ್ಲಿ ಈ ಕೆಳಗಿನವುಗಳು ಸೇರಿವೆ. ಕ್ವಾರ್ಕ್ ಗಳ ಆರು ಬಗೆ: ಅಪ್, ಡೌನ್, ಬಾಟಮ್, ಟಾಪ್, ಸ್ಟ್ರೇಂಜ್ ಮತ್ತು ಚಾರ್ಮ್. ಲೆಪ್ಟಾನ್ ಗಳ ಆರು ಬಗೆ: ಎಲೆಕ್ಟ್ರಾನ್, ಎಲೆಕ್ಟ್ರಾನ್ ನ್ಯುಟ್ರಿನೊ, ಮುವಾನ್, ಮುವಾನ್ ನ್ಯುಟ್ರಿನೊ, ತೌ ಮತ್ತು ತೌ ನ್ಯುಟ್ರಿನೊ. ಗೇಜ್ ಬೊಸೊನ್‍ ಗಳು: ಗುರುತ್ವ ದ ಗ್ರಾವಿಟನ್,ವಿದ್ಯುತ್ಕಾಂತತೆ ಯ ಫೊಟಾನ್,ಕ್ಷೀಣ ಬಲ ( )ದ ಮೂರು ಮತ್ತು ಬೊಸೊನ್‍ಗಳು,ದೃಡ ಬಲ ( )ದ ಎಂಟು ಗ್ಲುವಾನ್‍ ಗಳು. ಮಿಶ್ರ ಉಪಪರಮಾಣುಗಳು ಎರಡು ಅಥವಾ ಮೂರು ಪ್ರಾಥಮಿಕ ಉಪಪರಮಾಣುಗಳ ಬಂಧದಲ್ಲಿರುತ್ತವೆ.ಉದಾಹರಣೆಗ ಒಂದು ಪ್ರೋಟಾನ್ ಎರಡು ಅಪ್ ಮತ್ತು ಒಂದು ಡೌನ್ ಕ್ವಾರ್ಕ್ ಗಳಿಂದಾಗಿದೆ.ಅಂತೆಯೇ ಒಂದು ಹೀಲಿಯಮ್-೪ರ ಪರಮಾಣುವಿನಲ್ಲಿ ಎರಡು ಪ್ರೋಟಾನ್‍ಗಳು ಮತ್ತು ಎರಡು ನ್ಯೂಟ್ರಾನ್‍ ಗಳಿರುತ್ತವೆ. ಮಿಶ್ರ ಉಪಪರಮಾಣು ಕಣಗಳಲ್ಲಿ ಎಲ್ಲಾ ಹ್ಯಾಡ್ರನ್‍ ಗಳು,ಬಾರ್ಯಾನ್‍ ಗಳ ಗುಂಪು,ಮೆಸನ್‍ಗಳು ಸೇರಿರುತ್ತವೆ.